Book

Sanjay GubbiGirish BabuH C Poornesha
Download (7.46 MB)

Wildlife of Chamarajnagara, Karnataka | ಕರ್ನಾಟಕ ವನ್ಯಜೀವಿ ಜಾಲದ ಗಣಿ ಚಾಮರಾಜನಗರ ಜಿಲ್ಲೆ

ಈ ಕಿರುಹೊತ್ತಿಗೆಯಲ್ಲಿ, ಕೈ ಬರಹದ ಚಿತ್ರಗಳೊಂದಿಗೆ, ಚಾಮರಾಜನಗರ ಜಿಲ್ಲೆಯವನ್ಯಜೀವಿಗಳ ಕಿರುನೋಟವನ್ನು ನೀಡಲಾಗಿದೆ ಹಾಗೂ ಈ ಜಿಲ್ಲೆಯ ಕಾಡಿನಲ್ಲಿರುವ ಕೆಲವು ಅಪೂರ್ವವನ್ಯಜೀವಿಗಳ ವಿವರಗಳನ್ನು ಸಹ ನೀಡಲಾಗಿದೆ. ಚಾಮರಾಜನಗರ ಜಿಲ್ಲೆಯಲ್ಲಿರುವ ಕಾವೇರಿ ಮತ್ತು ಮಲೈಮಹದೇಶ್ವರ ವನ್ಯಜೀವಿಧಾಮಗಳ ಪ್ರಾಮುಖ್ಯತೆಯನ್ನು ತಿಳಿಸಿ ಈ ಪ್ರದೇಶಗಳು ಹುಲಿಯಂತಹ ಪ್ರಮುಖವನ್ಯಜೀವಿಯ ಜೊತೆಗೆ ಇನ್ನೂ ಅನೇಕ ವನ್ಯಜೀವಿಗಳ ಸಂಖ್ಯೆ ಅಭಿವೃದ್ದಿ ಹೊಂದುವ ಸಾಧ್ಯತೆಯನ್ನುವಿವರಿಸಲಾಗಿದೆ. ಒಂದು ಕಾಡಿನಿಂದ ಇನ್ನೊಂದು ಕಾಡಿಗೆ ಸಂಪರ್ಕ ಕಲ್ಪಿಸುವ ವನ್ಯಜೀವಿ ಪಥಗಳಅವಶ್ಯಕತೆ ಮತ್ತು ಅವುಗಳನ್ನು ಸಂರಕ್ಷಿಸುವ ಅಗತ್ಯತೆಗಳ ಬಗ್ಗೆ ನಿದರ್ಶನಗಳ ಮೂಲಕ ತಿಳಿಸಲಾಗಿದೆ.ಈ ಜಿಲ್ಲೆಯ ಕಾಡುಗಳು ಅನೇಕ ಜನ ಸಮುದಾಯಗಳ ವಾಸಸ್ಥಾನಗಳಾಗಿದ್ದು, ಈ ಸಮುದಾಯಗಳ ಕಾಡಿನ ಮೇಲಿನ ಅವಲಂಬನೆಯ ಬಗ್ಗೆ ಕೂಡ ಈ ಕಿರುಹೊತ್ತಿಗೆಯಲ್ಲಿ ವಿವರಿಸಲಾಗಿದೆ.ಈ ಕಾಡುಗಳು ಅನೇಕ ಪ್ರದೇಶಗಳಿಗೆ ನೀರಿನ ಮೂಲವಾಗಿದ್ದು, ಇದು ಈ ಕಾಡುಗಳ ಮೌಲ್ಯವನ್ನು ತಿಳಿಸುತ್ತದೆ. ಕೊನೆಗೆ ಈ ಕಾಡುಗಳಿಗೆ ಮತ್ತುವನ್ಯಜೀವಿಗಳಿಗಿರುವ ಮುಖ್ಯ ಕುತ್ತುಗಳನ್ನು ಈ ಕಿರುಹೊತ್ತಿಗೆಯಲ್ಲಿ ವಿವರಿಸಲಾಗಿದೆ.